ಚಿರೋಟಿ ರವೆ ಉಪಯೋಗಿಸಿ ಕರ್ಜಿಕಾಯಿ ಮಾಡುವ ಅತ್ಯಂತ ಸರಳ ವಿಧಾನ

ಬೇಕಾಗುವ ಸಾಮಗ್ರಿಗಳು:-
1 ಕಪ್ ಚಿರೋಟಿ ರವೆ
3 ಸ್ಪೂನ್ ಎಣ್ಣೆ
2 ಸ್ಪೂನ್ ತುಪ್ಪ
ನೀರು
1 ಕಪ್ ಕಡ್ಲೆಬೀಜ
1 ಸ್ಪೂನ್ ಗಸಗಸೆ
4 ಸ್ಪೂನ್ ಬಿಳಿ ಎಳ್ಳು‌
1 ಕಪ್ ಹುರಗಡಲೆ
2 ಕಪ್ ಬೆಲ್ಲ
1 ಕಪ್ ಒಣಕೊಬ್ರಿ ತುರಿ
1 ಸ್ಪೂನ್ ಏಲಕ್ಕಿ ಪುಡಿ
ಕರಿಯಲು ಎಣ್ಣೆ

ಮಾಡುವ ವಿಧಾನ:-
ಮೊದಲು ಒಂದು ಬೌಲನಲ್ಲಿ 1 ಕಪ್ ಚಿರೋಟಿ ರವಾ, 3 ಸ್ಪೂನ್ ಬಿಸಿ ಎಣ್ಣೆ, 2 ಸ್ಪೂನ್ ತುಪ್ಪ ಹಾಕಿ ಕಲಿಸಿ ಆಮೇಲೆ ಸ್ವಲ್ಪ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಿಸಿ 10 ನಿಮಿಷ ನೆನೆಯಲು ಬಿಡಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 1 ಕಪ್ ಕಡ್ಲೆಬೀಜ ಹಾಕಿ ಚನಾಗಿ ಹುರಿದು ಪಕ್ಕದಲ್ಲಿಡಿ . ನಂತರ ಅದೇ ಪ್ರೈ ಪ್ಯಾನಗೆ 1 ಸ್ಪೂನ್ ಗಸಗಸೆ, 4 ಸ್ಪೂನ್ ಬಿಳಿ ಎಳ್ಳು ಹಾಕಿ ಹುರಿದು ತಣ್ಣಗಾಗಲು ಬಿಡಿ . ನಂತರ ಮಿಕ್ಸಿ ಜಾರಿನಲ್ಲಿ 1 ಕಪ್ ಹುರಗಡಲೆ & 1/4 ಸ್ಪೂನ್ ಬಿಳಿ ಎಳ್ಳು & ಸ್ವಲ್ಪ ಬೆಲ್ಲ ಹಾಕಿ ಪುಡಿ ಮಾಡಿ ಬೌಲನಲ್ಲಿ ಹಾಕಿ ನಂತರ ಅದಕ್ಕೆ 2 ಕಪ್ ಬೆಲ್ಲ ಹುರದಿರೋ ಬಿಳಿ ಎಳ್ಳು & ಗಸಗಸೆ, 1 ಕಪ್ ಒಣ ಕೊಬ್ರಿ ತುರಿ & ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಮುಂಚೆನೆ ಕಲಿಸಿಟ್ಟಿರೋ ಹಿಟ್ಟಿನಲ್ಲಿ ಸ್ವಲ್ಪ ಹಿಟ್ಟನ್ನು ತಗೊಂಡು ಒಂದು ಉಂಡೆ ಮಾಡಿ ಪುರಿ ತರ ಲಟ್ಟಿಸಿ ಕರ್ಜಿಕಾಯಿ ಮಾಡೋ ಮೊಲ್ಡ ಮೇಲ ಹಾಕಿ ಮದ್ಯದಲ್ಲಿ ರೆಡಿಮಾಡಿರೋ ಪುಡಿಯನ್ನು ಇಟ್ಟು ಎರಡು ಕಡೆಗೂ ನೀಟಾಗಿ ಪ್ರೆಸ್ ಮಾಡಿ ಕಾದಿರೋ ಎಣ್ಣೆಯಲ್ಲಿ ಹಾಕಿ ಎರಡು ಕಡೆಗೂ ನೀಟಾಗಿ ಕರೆದರೆ ರುಚಿಕರವಾದ ಕ್ರಿಸ್ಪಿಯಾದ ರವೆ ಕರ್ಜಿಕಾಯಿ ಸವಿಯಲು ಸಿದ್ಧ.

ವಿಡಿಯೋ ಲಿಂಕ್:https://youtu.be/97CLgEEGcRA

ಕ್ಯಾಪ್ಸಿಕಂ ರೈಸ್ ಮಾಡುವ ಅತ್ಯಂತ ಸರಳ ವಿಧಾನ

ಬೇಕಾಗಿರುವ ಸಾಮಗ್ರಿಗಳು:-
1 ಕಪ್ ಕ್ಯಾಪ್ಸಿಕಂ
1/2 ಕಪ್ ಈರುಳ್ಳಿ
1/2 ಕಪ್ ಟೊಮೆಟೊ
3-4 ಸ್ಪೂನ್ ಎಣ್ಣೆ
1/2 ಸ್ಪೂನ್ ಸಾಸಿವೆ
1/2 ಸ್ಪೂನ್ ಜಿರಿಗೆ
1 ಸ್ಪೂನ್ ಕಡ್ಲೆಬೆಳೆ
1 ಸ್ಪೂನ್ ಉದ್ದಿನಬೆಳೆ
1/2 ಸ್ಪೂನ್ ಅರಿಶಿನ ಪುಡಿ
1 ಸ್ಪೂನ್ ದನಿಯಾ ಪುಡಿ
1 ಸ್ಪೂನ್ ಅಚ್ಚಕಾರದ ಪುಡಿ
ಕರಿಬೇವು
ರುಚಿಗೆ ತಕ್ಕಷ್ಟು ಉಪ್ಪು
ರೈಸ್
ಕೊತಂಬರಿ ಸೊಪ್ಪು

ಮಾಡುವ ವಿಧಾನ:-
ಮೊದಲು ಒಲೆಯ ಮೇಲೆ ಒಂದು ಪಾತ್ರೆ ಇಡಿ ಅದರಲ್ಲಿ 3-4 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ ಆಮೇಲೆ 1/2 ಸಾಸಿವೆ, 1/2 ಸ್ಪೂನ್ ಜಿರಿಗೆ, 1 ಸ್ಪೂನ್ ಕಡ್ಲೆಬೆಳೆ, 1 ಸ್ಪೂನ್ ಉದ್ದಿನಬೆಳೆ, ಕರಿಬೇವು ಹಾಕಿ ಎಲ್ಲವನ್ನು ಹುರಿದು ನಂತರ 1/2 ಕಪ್ ಈರುಳ್ಳಿ, 1/2 ಕಪ್ ಟೊಮೆಟೊ & 1 ಕಪ್ ಕ್ಯಾಪ್ಸಿಕಂ ಹಾಕಿ ಎಲ್ಲವನ್ನು ಹುರಿದು ನಂತರ ರುಚಿಗೆ ತಕ್ಕಷ್ಟು ಉಪ್ಪು 1/2 ಸ್ಪೂನ್ ಅರಿಶಿನ ಪುಡಿ, 1ಸ್ಪೂನ್ ದನಿಯಾ ಪುಡಿ, & 1 ಸ್ಪೂನ್ ಅಚ್ಚಕಾರದ ಪುಡಿ ಹಾಕಿ ಎಲ್ಲವನ್ನು ಕಲಿಸಿ ನಂತರ ಮುಂಚೆನೆ ಮಾಡಿರುವಂತ ರೈಸ್ & ಕೊತಂಬರಿ ಸೊಪ್ಪನ್ನು ಹಾಕಿ ಕಲಿಸಿದರೆ ರುಚಿಕರವಾದ ಕ್ಯಾಪ್ಸಿಕಂ ರೈಸ್ ಸವಿಯಲು ಸಿದ್ಧ.

https://youtu.be/1LLV-8DoPSU

#breakfast #recipe #deepaeasyhomerecipe

ಗೀ ರೈಸ್ ಮಾಡುವ ಅತ್ಯಂತ ಸರಳ ವಿಧಾನ.

ಬೇಕಾಗಿರುವ ಸಾಮಾಗ್ರಿಗಳು:
1 ಕಪ್ ಬಾಸ್ಮತಿ ಅಕ್ಕಿ
2 ಚಮಚ ತುಪ್ಪ
1 ಕಪ್ ಈರುಳ್ಳಿ
ಗೋಡಂಬಿ 8- 10
ಒಣ ದ್ರಾಕ್ಷಿ 8-10
ಲವಂಗ 2-3
ಚೆಕ್ಕೆ 2-3
ಕಾಳು ಮೆಣಸು 3-4
ಹಸಿ ಮೆಣಸಿನಕಾಯಿ1-2

ಮಾಡುವ ವಿಧಾನ:
ಒಂದು ಒಲೆಯ ಮೇಲೆ ಪಾತ್ರೆ ಇಡಿ ಅದಕ್ಕೆ 2 ಚಮಚ ತುಪ್ಪ ಬಿಸಿ ಮಾಡಿ ನಂತರ ಗೋಡಂಬಿ, ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ಅದನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ ಲವಂಗ, ಚಕ್ಕೆ,ಕಾಳು ಮೆಣಸು, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿದುಕೊಳ್ಳಿ ನಂತರ ಮುಂಚೆನೆ ನೆನಸಿರುವ 1 ಕಪ್ ಅಕ್ಕಿಯನ್ನು ಹಾಕಿ ಅದಕ್ಕೆ ಎರಡು ಕಪ್ ನೀರು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮೇಲೆ ಮುಚ್ಚಳವನ್ನು ಮುಚ್ಚಿ ಸಣ್ಣ ಒಲೆಯ ಮೇಲೆ 20 ನಿಮಿಷಗಳ ಕಾಲ ಬೇಯಲು ಬಿಡಿ ನಂತರ ಮುಚ್ಚಿರುವ ಮುಚ್ಚಳವನ್ನು ತೆಗೆದು ಅದಕ್ಕಿ ಮುಂಚೆನೆ ಹುರಿದಿಟ್ಟಿರುವ ಒಣದ್ರಾಕ್ಷಿ, ಗೋಡಂಬಿ ಯನ್ನು ಮಿಶ್ರಣ ಮಾಡಿದರೆ ರುಚಿಕರವಾದ ಗೀ ರೈಸ್ ಸವಿಯಲು ಸಿದ್ಧ.

https://youtu.be/O8wxVxIgdvQ

ಗೌರಿ ಗಣೇಶ ಹಬ್ಬಕ್ಕೆ ಸಿಹಿ ಕಡುಬು ಮಾಡುವ ಅತ್ಯಂತ ಸರಳ ವಿಧಾನ |

ಬೇಕಾಗಿರುವ ಸಾಮಾಗ್ರಿಗಳು:
1 ಕಪ್ ಅಕ್ಕಿ ಹಿಟ್ಟು
1 ಕಪ್ ಕೊಬ್ಬರಿ ತುರಿ
1/2 ಚಮಚ ತುಪ್ಪ
1/2 ಕಪ್ ಬೆಲ್ಲ
ಏಲಕ್ಕಿ 2-3

ಮಾಡುವ ವಿಧಾನ:
ಸ್ಟವ್ ಆನ್ ಮಾಡಿ ಒಂದು ಪಾತ್ರೆ ಇಡಿ ಅದಕ್ಕೆ 1/2 ಚಮಚ ತುಪ್ಪ ಹಾಕಿ ಬಿಸಿ ಆದ ಮೇಲೆ 1 ಕಪ್ ತುರಿದಿರುವ ಕೊಬ್ಬರಿ ಹಾಕಿ ನಂತರ 1/2 ಕಪ್ ಬೆಲ್ಲ ಸೇರಿಸಿ ಹಾಗೆ 2-3 ನಿಮಿಷ ಬೇಯಿಸಿ ಕೊನೆಯಲ್ಲಿ ಏಲಕ್ಕಿ ಪುಡಿ ಮಿಶ್ರಣ ಮಾಡಿ ಸ್ಟವ್ ಆಪ್ ಮಾಡಿ ತಣ್ಣಗಾಗಲು ಬಿಡಿ
ಸ್ಟವ್ ಆನ್ ಮಾಡಿ ಒಂದು ಪಾತ್ರೆಯಲ್ಲಿ 1 1/2 ಕಪ್ ನಷ್ಟು ನೀರು ಹಾಕಿ ಕುದಿತಾಯಿರುವ ಸಮಯದಲ್ಲಿ 1 ಕಪ್ ನಷ್ಟು ಅಕ್ಕಿ ಹಿಟ್ಟು ಹಾಕಿ ಮಿಶ್ರಣ ಮಾ#sweetrecipeಡಿ ಹಿಟ್ಟು ಗಂಟು ಆಗದಂತೆ ನೋಡಿಕೊಳ್ಳಿ
ಬಿಸಿಯಾಗಿರುವ ಹಿಟ್ಟು ಒಂದು ಪಾತ್ರೆಯಲ್ಲಿ ಹಾಕಿ ಸರಿಯಾಗಿ ನಾದಿಕೊಳ್ಳಿ ನಂತರ ಅಕ್ಕಿ ಹಿಟ್ಟನ್ನು ಉಂಡೆ ಗಳನ್ನಾಗಿ ಮಾಡಿ ನಂತರ ಅದನ್ನು ಏಲೆ ರೀತಿಯಲ್ಲಿ ಮಾಡಿ ಅದಕ್ಕೆ ಮುಂಚೆನೆ ಮಾಡಿರುವ ಊರ್ಣ ಇಟ್ಟು ಕಡಬು ರೀತಿಯಲ್ಲಿ ಮಡಚಿ.
ನಂತರ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಒಂದು ಸ್ಟೇನರ್ ಇಟ್ಟು ಅದರಲ್ಲಿ ಬಾಳೆ ಎಲೆಯನ್ನು ಜೋಡಿಸಿ ನಂತರ ಕಡಬು ಗಳನ್ನು ಹಾಕಿ ಬೇಯಿಸಿದರೆ ಗಣೇಶನಿಗೆ ಪ್ರಿಯವಾದ ಸಿಹಿ ಗಡಬು ಸಿದ್ದ.

sihikadabu #ganeshfestival #deepaeasyhomerecipe #homerecipe #recipes

ಮಾವಿನ ಹಣ್ಣಿನ ರಸಾಯನ(milk shake )ಮಾಡುವ ವಿಧಾನ.

ಅತ್ಯಂತ ಸರಳ ವಿಧಾನ:-
ಬೇಕಾಗುವ ಸಾಮಗ್ರಿಗಳು :-
3-4 ಹಣ್ಣಾದ ಮಾವಿನ ಹಣ್ಣು
1 ಕಪ್ ಹಾಲು
2 ಚಮಚ ಸಕ್ಕರೆ
2 ಏಲಕ್ಕಿ

ಮಾಡುವ ವಿಧಾನ:-
ಮೊದಲು ಮಾವಿನ ಹಣ್ಣನ್ನು ನೀರಿನಲ್ಲಿ ಚನಾಗಿ ತೆಳೆದು ನಂತರ ಕಟ್ಟಮಾಡಿ ಸಿಪ್ಪೆ & ಚಿಪ್ಪನ್ನು ತೆಗೆದು ಉಳಿದಿರೊ ಭಾಗವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನಂತರ ಅದಕ್ಕೆ 1 ಕಪ್ ಹಾಲು, 2ಚಮಚ ಸಕ್ಕರೆ & 2 ಏಲಕ್ಕಿ ಯನ್ನು ಬಿಡಿಸಿ ಹಾಕಿ ನುನ್ನಗೆ ರುಬ್ಬಿದರೆ ರುಚಿರವಾದ ಮಾವಿನ ಹಣ್ಣಿನ ರಸಾಯನ (milk shake) ಕುಡಿಯಲು ರೆಡಿ.

ಮಾವಿನ ಹಣ್ಣಿನ ಶೀಕರಣಿ ಮಾಡುವ ಅತ್ಯಂತ ಸರಳ ವಿಧಾನ.


ಬೇಕಾಗುವ ಸಾಮಗ್ರಿಗಳು:-
4-5 ಹಣ್ಣಾದ ಮಾವಿನ ಹಣ್ಣು
1/2 ಕಪ್ ಬೆಲ್ಲ
1 ಚಮಚ ಏಲಕ್ಕಿ ಪುಡಿ
1/4 ಚಮಚ ಉಪ್ಪು

ಮಾಡುವ ವಿಧಾನ:-ಮೊದಲು ಹಣ್ಣಾದ ಮಾವಿನ ಹಣ್ಣನ್ನು ಚನ್ನಾಗಿ ನೀರಿನಲ್ಲಿ ತೊಳೆದು ನಂತರ ಹಣ್ಣಿನ ಮೇಲಿರುವ ತುದಿಯನ್ನು ತೆಗೆದು ಚಿಪ್ಪು ಸಮೇತ ರಸವನ್ನು ಒಂದು ಬೌಲನಲ್ಲಿ ಹಾಕಿ ನಂತರ ಸ್ಲಲ್ಪ-ಸ್ವಲ್ಪ ನೀರನ್ನು ಹಾಕಿ ಚಿಪ್ಪಿನಲ್ಲಿರುವಂತ ಎಲ್ಲ ರಸವನ್ನು ತೆಗೆದು ಚಿಪ್ಪನ್ನು ಹೊರಗೆ ತೆಗೆದುಕೊಳ್ಳಿ. ನಂತರ ಆ ಮಾವಿನ ಹಣ್ಣಿನ ರಸಕ್ಕೆ 1/2ಕಪ್ ಬೆಲ್ಲ (ರುಚಿಗೆ ತಕ್ಕಷ್ಟು ಬೆಲ್ಲ), 1 ಚಮಚ ಏಲಕ್ಕಿ ಪುಡಿ, & 1/4 ಚಮಚ ಉಪ್ಪು ಹಾಕಿ ನೀಟಾಗಿ ಎಲ್ಲವನ್ನು ಕಲಿಸಿದರೆ ರುಚಿಕರವಾದ ಮಾವಿನ ಹಣ್ಣಿನ ಶೀಕರಣಿ ಸವಿಯಲು ಸಿದ್ಧ. ಬಿಸಿ-ಬಿಸಿಯಾದ ಚಪಾತಿ & ಹೋಳಿಗೆ ಜೊತೆ ಈ ರುಚಿಕರವಾದ ಮಾವಿನ ಹಣ್ಣಿನ ಶೀಕರಣಿ ತುಂಬಾ ಚನಾಗಿರುತ್ತೆ .

ರುಚಿಕರವಾದ ಟೊಮೆಟೊ ಚಟ್ನಿ ಮಾಡುವ ಅತ್ಯಂತ ಸರಳ ವಿಧಾನ

ಬೇಕಾಗುವ ಸಾಮಗ್ರಿಗಳು:-
5 ಹಣ್ಣಾಗಿರೋ ಟೊಮೆಟೊ
2 ಸ್ಪೂನ್ ಎಣ್ಣೆ
5-6 ಎಸಳು ಬೆಳ್ಳುಳ್ಳಿ
1 ಈರುಳ್ಳಿ
2 ಹಸಿಮೆಣಸಿನಕಾಯಿ
ಕೊತಂಬರಿ ಸೊಪ್ಪು
1 ಸ್ಪೂನ್ ಅಚ್ಚಕಾರದ ಪುಡಿ
1/2 ಸ್ಪೂನ್ ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:-
ಮೊದಲು ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಬಿಸಿಮಾಡಿ ಆಮೇಲೆ 5 ಕತ್ತರಿಸಿದ ಟೊಮೆಟೊ ಹಣ್ಣನ್ನು ಹಾಕಿ ಮೇಲ್ ಮುಚ್ಚಿ ಮದ್ಯಮ ಉರಿಯಲ್ಲಿ ಟೊಮೆಟೊ ಮೆತ್ತಗಾಗುವವರೆಗೆ ಬೆಯಿಸಿಕೊಳ್ಳಿ . ಒಂದು ಕಡೆ ಟೊಮೆಟೊ ಬೆಂದ ಮೇಲೆ ಅದೆ ರೀತಿ‌‌ ಇನ್ನೊಂದು ಕಡೆಗೂ ತಿರುಗಿಸಿ ಬೆಯಿಸಿಕೊಳ್ಳಿ . ಎರಡು ಕಡೆಗೂ ಬೆಂದ ಮೇಲೆ ಸಣ್ಣ ಉರಿಯಲ್ಲಿಟ್ಟು ಬೇಯಿಸಿದ ಎಲ್ಲಾ ಟೊಮೆಟೊ ಹಣ್ಣನ್ನು ಸ್ಯ್ಮಾಶ್ ಮಾಡಿ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1 ಸ್ಪೂನ್ ಅಚ್ಚಕಾರದ ಪುಡಿ, 1/2 ಸ್ಪೂನ್ ಬೆಲ್ಲ, 2 ಕತ್ತರಿಸಿದ ಹಸಿಮೆಣಸಿನಕಾಯಿ, 1 ಕತ್ತರಿಸಿದ ಈರುಳ್ಳಿ & ಕೊತಂಬರಿ ಸೊಪ್ಪು ನ್ನು ಹಾಕಿ ಎಲ್ಲವನ್ನು ಕಲಿಸಿ 1 ನಿಮಿಷ ಬೇಯಿಸಿದರೆ ಬಿಸಿ-ಬಿಸಿ ಅನ್ನ, ಚಪಾತಿ, ದೋಸೆ & ರೊಟ್ಟಿಗೆಲ್ಲ ರುಚಿಕರವಾದ ಟೊಮೆಟೊ ಚಟ್ನಿ ಸವಿಯಲು ಸಿದ್ಧ‌.

ವಿಡಿಯೋ ಲಿಂಕ್:https://youtu.be/zzDw68bnlfU

ಬದನೆಕಾಯಿ ಎಣ್ಣೆಗಾಯಿ ಮಾಡುವ ಅತ್ಯಂತ ಸರಳ ವಿಧಾನ

ಬೇಕಾಗುವ ಸಾಮಗ್ರಿಗಳು:-
7-8 ಚಿಕ್ಕ- ಚಿಕ್ಕ ಬದನೆಕಾಯಿ
1/2 ಕಪ್ ಹುರಿದ ಕಡಲೆ ಬೀಜದ ಪುಡಿ
1/4 ಕಪ್ ಹುಚ್ಚೆಳ್ಳ ಪುಡಿ
1ಸ್ಪೂನ್ ಅರಿಶಿನ ಪುಡಿ
3 ಸ್ಪೂನ್ ಮಸಾಲಿ ಕಾರ
1 ಸ್ಪೂನ್ ದನಿಯಾ ಪೌಡರ್
1 ಸ್ಪೂನ್ ಗರಂ ಮಾಸಾಲ
ರುಚಿಗೆ ತಕ್ಕಷ್ಟು ಉಪ್ಪು
1/2 ಕಪ್ ಹುಣಸೆ ಹಣ್ಣಿನ ರಸ
1/2 ಸ್ಪೂನ್ ಬೆಲ್ಲ
1 ಸ್ಪೂನ್ ಸಾಸಿವೆ
1 ಸ್ಪೂನ್ ಜಿರಿಗೆ
ಕರಿಬೇವು
1 ಕಪ್ ಈರುಳ್ಳಿ
1/2 ಕಪ್ ಟೊಮೆಟೊ
ನೀರು
ಕೊತಂಬರಿ ಸೊಪ್ಪು

ಮಾಡುವ ವಿಧಾನ:-
ಮೊದಲು ಒಂದು ಬೌಲನಲ್ಲಿ 1/2 ಕಪ್ ಹುರಿದ ಕಡ್ಲೆಬೀಜದ ಪುಡಿ, 1/4 ಕಪ್ ಕಾರೆಳ್ಳು (ಹುಚ್ಚೆಳ್ಳ) ಪುಡಿ, 1/2 ಸ್ಪೂನ್ ಅರಿಶಿನ ಪುಡಿ, 3 ಸ್ಪೂನ್ ಮಸಾಲಿಕಾರ, 1 ಸ್ಪೂನ್ ಗರಂ ಮಸಾಲ, 1 ಸ್ಪೂನ್ ದನಿಯಾ ಪೌಡರ್, 1/2 ಸ್ಪೂನ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು & 1/2 ಕಪ್ ಹುಣಸೆ ಹಣ್ಣಿನ ರಸ ಹಾಕಿ ಎಲ್ಲವನ್ನು ಕಲಿಸಿ‌ ನಂತರ ಕತ್ತರಿಸಿದ ಬದನೆಕಾಯಿ ಮದ್ಯದಲ್ಲಿ ಮುಂಚೆ ಕಲಿಸಿಟ್ಟ ಮಸಾಲೆಯನ್ನು ತುಂಬಿ
ಪಕ್ಕದಲ್ಲಿಡಿ. ನಂತರ ಒಲೆಯ ಮೇಲೆ ಒಂದು‌ ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ ಆಮೇಲೆ 1 ಸ್ಪೂನ್ ಸಾಸಿವೆ & ಜಿರಿಗೆ , ಸ್ವಲ್ಪ ಕರಿಬೇವು, ಕತ್ತರಿಸಿದ 1 ಕಪ್ ಈರುಳ್ಳಿ & 1/2 ಕಪ್ ಕತ್ತರಿಸಿದ ಟೊಮೆಟೊ ಹಾಕಿ ಎಲ್ಲವನ್ನು ಹುರಿದು ನಂತರ 1/4 ಸ್ಪೂನ್ ಅರಿಶಿನ ಪುಡಿ & ಮುಂಚೆನೆ ಮಸಾಲೆ ತುಂಬಿದ ಬದನೆಕಾಯಿ ಯನ್ನು ಹಾಕಿ 1 ನಿಮಿಷ ಚನಾಗಿ ಹುರಿದು ನಂತರ ಉಳಿದ ಮಸಾಲೆ & ಸ್ವಲ್ಪ ನೀರನ್ನು ಯನ್ನು ಹಾಕಿ ಕಲಿಸಿ 2 ನಿಮಿಷಗಳ ಕಾಲ ಮೇಲ್ ಮುಚ್ಚಿ ಬೇಯಿಸಿ ಕೊನೆಯಲ್ಲಿ ಸ್ವಲ್ಪ ಕೊತಂಬರಿ ಸೊಪ್ಪು ಹಾಕಿ ಕಲಿಸಿದರೆ ರುಚಿಕರವಾದ ಮಸಾಲಾ ಎಣ್ಣೆ ಬದನೆಕಾಯಿ ಸವಿಯಲು ಸಿದ್ಧ.

ವಿಡಿಯೋ ಲಿಂಕ್:https://youtu.be/_p5YRChF46o

ಟೊಮೆಟೊ ರೈಸ್ ಮಾಡುವ ಅತ್ಯಂತ ಸರಳ ವಿಧಾನ

ಬೇಕಾಗುವ ಸಾಮಗ್ರಿಗಳು:-
3 ಹಣ್ಣಾದ ಟೊಮೆಟೊ
5-6 ಎಸಳು ಬೆಳ್ಳುಳ್ಳಿ
3 ಸ್ಪೂನ್ ಅಚ್ಚಕಾರದ ಪುಡಿ
3 ಸ್ಪೂನ್ ಎಣ್ಣೆ
1 ಸ್ಪೂನ್ ಸಾಸಿವೆ & ಜಿರಿಗೆ
1 ಸ್ಪೂನ್ ಕಡ್ಲೆಬೆಳೆ & ಉದ್ದಿನಬೆಳೆ
ಕರಿಬೇವು
ತುರದಿರೋ ಶುಂಠಿ ಬೆಳ್ಳುಳ್ಳಿ
2 ಒಣಮೆಣಸಿನಕಾಯಿ
1 ಕಪ್ ಈರುಳ್ಳಿ
ರುಚಿಗೆ ತಕ್ಕಷ್ಟು ಉಪ್ಪು
1/4 ಸ್ಪೂನ್ ಅರಿಶಿನ ಪುಡಿ
1 ಬೌಲ್ ಬೇಯಿಸಿದ ಅನ್ನ

ಮಾಡುವ ವಿಧಾನ:-
ಮೊದಲು ಮಿಕ್ಸಿ ಜಾರಿನಲ್ಲಿ 3 ಹಣ್ಣಾದ ಟೊಮೆಟೊ, 5-6 ಎಸಳು ಬೆಳ್ಳುಳ್ಳಿ,
3 ಸ್ಪೂನ್ ಅಚ್ಚಕಾರದ ಪುಡಿ ಯನ್ನು ಹಾಕಿ
ನುನ್ನಗೆ ರುಬ್ಬಿಕೊಳ್ಳಿ. ನಂತರ ಒಲೆಯ ಮೇಲೆ 3 ಸ್ಪೂನ್ ಎಣ್ಣೆ ಬಿಸಿಮಾಡಿ ಆಮೇಲೆ 1 ಸ್ಪೂನ್ ಸಾಸಿವೆ,ಜಿರಿಗೆ, 1 ಸ್ಪೂನ್ ಕಡ್ಲೆಬೆಳೆ, 1 ಸ್ಪೂನ್ ಉದ್ದಿನಬೆಳೆ, ಕರಿಬೇವು, 1 ಸ್ಪೂನ್ ತುರದಿರೋ ಶುಂಠಿ ಬೆಳ್ಳುಳ್ಳಿ, 2 ಒಣ ಮೆಣಸಿನಕಾಯಿ & 1 ಕಪ್ ಈರುಳ್ಳಿ ಹಾಕಿ ಎಲ್ಲವನ್ನು ಹುರಿದು ನಂತರ 1 ಬೌಲ್ ನಷ್ಟು ಬೇಯಿಸಿದ ಅನ್ನವನ್ನು & ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನಾಗಿ ಕಲಿಸಿದರೆ ರುಚಿಕರವಾದ ಟೊಮೆಟೊ ರೈಸ್ ಸವಿಯಲು ಸಿದ್ಧ.

ವಿಡಿಯೋ ಲಿಂಕ್:https://youtu.be/4p7J9wEHL3c

ಹುಬ್ಬಳ್ಳಿ-ಧಾರವಾಡ ಸ್ಪೆಷಲ್ ಗಿರ್ಮಿಟ್ ಮಾಡುವ ಅತ್ಯಂತ ಸರಳ ವಿಧಾನ | Girmit Recipe Kannada | Girmit Recipe

ಬೇಕಾಗಿರುವ ಸಾಮಾಗ್ರಿಗಳು:
1) 1 ಪಾತ್ರೆಯಲ್ಲಿ ಪುರಿ ಅಥವಾ ಮಂಡಕ್ಕಿ
2) 1 ಸ್ಪೂನ್ ಸಾಸಿವೆ
3) 1 ಸ್ಪೂನ್ ಜೀರಿಗೆ
4) ಹಸಿ ಮೆಣಸಿನಕಾಯಿ ಸ್ವಲ್ಪ
5) 1 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ
6) 1 ಕಪ್ ಸಣ್ಣದಾಗಿ ಹೆಚ್ಚಿದ ಟೊಮ್ಯಾಟೊ
7) 1 ಸ್ಪೂನ್ ಅರಿಸಿನ ಪುಡಿ
8) ಕರಿಬೇವು
9) ಕೊತಂಬರಿ ಸೊಪ್ಪು
10) ನೆನಸಿರುವ ಹುಣಿಸೆ ಹಣ್ಣು
11) 1/2 ಕಪ್ ಹುರಿಗಡಳೆ / ಪುಟಾಣಿ
12) 1/2 ಕಪ್ ಶೇಂಗಾ
13) ರುಚಿಗೆ ತಕ್ಕಷ್ಟು ಉಪ್ಪು
14) ಅಡುಗೆ ಎಣ್ಣೆ

ಮಾಡುವ ವಿಧಾನ: 1/2 ಕಪ್ ನಷ್ಟು ಹುರಿಗಡಳೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ 1 ಸ್ಪೂನ್ ಸಾಸಿವೆ,1 ಸ್ಪೂನ್ ಜೀರಿಗೆ ಸ್ವಲ್ಪ ಕರಿಬೇವು ಖಾರಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ ಆಮೇಲೆ ಸ್ವಲ್ಪ ಅರಿಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹುಣಸೆ ಹಣ್ಣಿನ ರಸ ಹಾಕಿ ಬೇಯಿಸಿ

ಸ್ಟವ್ ಆಪ್ ಮಾಡಿ ತಣ್ಣಗಾಗಲು ಬಿಡಿ ಆಮೇಲೆ ಒಂದು ಪಾತ್ರೆಯಲ್ಲಿ ಮಂಡಕ್ಕಿ ತೆಗೆದುಕೊಳ್ಳಿ ಮುಂಚೆನೆ ಮಾಡಿರುವ ಗೊಜ್ಜು ಚೆಚ್ಚಿದ ಟೊಮ್ಯಾಟೊ ಹುರಿದ ಶೇಂಗಾ ಪುಡಿಮಾಡಿದ ಹುರಿಗಡಳೆ ಮತ್ತು ಕೊನೆಯಲ್ಲಿ ಸ್ಪಲ್ಪ ಕೊತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ

ಪ್ಲೇಟ್ ಗೆ ಹಾಕಿ ಮೇಲಿನಿಂದ ಈರುಳ್ಳಿ, ಟೊಮ್ಯಾಟೊ, ಕೊತಂಬರಿ ಸೊಪ್ಪು ಹಾಕಿ ಇದೀಗ ರುಚಿಕರವಾದ ಗಿರ್ಮಿಟ್ ಸವಿಯಲು ಸಿದ್ಧ.

ವಿಡಿಯೋ ಲಿಂಕ್:
https://youtu.be/oQljkjP0pHI?si=DyChnJX0BaRIO4TZ

Review Your Cart
0
Add Coupon Code
Subtotal